ಹೆತ್ತವಳನ್ನು ಪದಗಳಲ್ಲಿ ಸೆರೆ ಹಿಡಿಯಲು
ಪ್ರಯತ್ನಿಸುತ್ತಿರುವಾಗಲೇ ಲೇಖನಿ ನನಗೆ
ಮೂರ್ಖನೆಂದು ನಾಮಕರಣ ಮಾಡಿತ್ತು...-
ಜೀವನ ಅಂದ್ರೆ ನಿಮ್ಮನ್ನು ನೀವು ಹುಡುಕಾಡೋದಲ್ಲ...ನಿಮ್ಮನ್ನು ನೀವು ರೂಪಿಸಿಕೊಳ್ಳೋದು...
-
ಮಗುವನ್ನು
ಮಮತೆಯಿಂದ
ಮುದ್ದಿಸಿ
ಮಾನವಿಯತೆಯನ್ನು
ಮನಕರ್ಥೈಸಿ
ಮನುಷ್ಯನನ್ನಾಗಿ
ಮಾರ್ಪಡಿಸುವವಳು
ಮಾತೆಯೊಬ್ಬಳೆ....
-
ಕದ್ದು ಕದ್ದು ನೋಡುವ ಚೋರಿ
ನೋಟದಲ್ಲೇ ಬಂಧಿಸೋ ಪೋರಿ
ತುಂಟನಗುವಲ್ಲೆ ಶಿಕ್ಷಿಸೋ ನಾರಿ
ತುಟಿಯಂಚಲಿ ಅಡಗಿದೆ ಮಧುಗಿರಿ
ಕಂಡಾಗ ದೂರ ಓಡುವ ಕುವರಿ
ನಾಟ್ಯದಂತೆ ಬಳುಕುವ ವಯ್ಯಾರಿ
ಕೋಗಿಲೆಯಂತೆ ಹಾಡುವ ಕಿನ್ನರಿ
ಅಪ್ಸರೆಯಂತಹ ಲಾವಣ್ಯದ ಸಿರಿ
ನವನೀತದಂತಹ ಮಾತಿನ ಪರಿ
ಹಾರುತಿದೆ ಮುಂಗುರುಳ ಮಂಜರಿ
ಹಂಸನಡಿಗೆ ನಯನಮನೋಹರಿ
ಘಲ್ಲೆನ್ನುವ ಇಂಪಾದ ಕಾಲ್ಗೆಜ್ಜೆ ಸುಂದರಿ-
जिल्लत ए शहर हर खबर बेचता है
हाथ में कफ़न लिये कब्र बेचता है.
गरीबी का बोझ कौन ख़रीद पाया है .
कोई गुबारों में भर के सब्र बेचता है.
उधार की पूंजी से बेटी बिधा कर दी.
दहेज़ लेने वाला ईमां जब्र बेचता है.
शहर गांव में बहुत फर्क है साहब
शहर बोतल में भर के अब्र बेचता है
जिल्लत - दुर्गति.
-
ಬದುಕಿರುವ ತನಕ ಸಾಯೋ ಯೋಚನೆ ಮಾಡ್ಬೇಡಿ... ಬದುಕೇ ಸಾವನ್ನು ಸಾಯಿಸಿ, ನಿಮ್ಮನ್ನು ಬದುಕಿಸುತ್ತದೆ....
-
ಅವನು ಪ್ರೇಮ ಕಾವ್ಯ ಪಂಡಿತ,
ಅವನ ಮಾತುಗಳೆಲ್ಲ ಶೃಂಗಾರ ರಸದಿಂದಲೇ ಅಲಂಕೃತ, ಮುದ್ದು ಮಾಡೆನ್ನ ಮುನಿಸನ್ನು
ತಣಿಸುವದವನಿಗೆ ತುಂಬಾನೇ ಕರಗತ
ಅವನೆನ್ನ ಅಣುಅಣುವನಿಲ್ಲೂ ಅನವರತ
ಹರಿಸುತ್ತಿರುವ ಅನುರಾಗದಮೃತ-
ತುಳಿದು ಬೆಳೆಯುವುದು,
ಬೆಳೆದು ಬೆಳೆಸುವುದಕ್ಕಿಂತ...
ಬೆಳೆಸಿ ಬೆಳೆಯುವುದು ಶಾಶ್ವತ....-